Baket Drama

Baket Drama

 

Invite friends

Contact Us

Page Views : 21

About The Event

ಬೆಕೆಟ್ 
ರಚನೆ: ಜಾನ್ ಆನ್ವಿ (ಮೂಲ ಫ್ರೆಂಚ್ ನಾಟಕ, 1958)
ಪ್ರಸ್ತುತಿ : ಬೆಂಗಳೂರು ಥಿಯೇಟರ್ ಕಂಪನಿ 
ವಿನ್ಯಾಸ ಮತ್ತು ನಿರ್ದೇಶನ: ಪ್ರಕಾಶ್ ಬೆಳವಾಡಿ 

ನಾಟಕದ ಐತಿಹಾಸಿಕ ನೆಲೆ 12ನೆ ಶತಮಾನದ ಇಂಗ್ಲೆಂಡಿನ ನಾರ್ಮನ ಜನಾಂಗದ ದೊರೆ ಎರಡನೆ ಹೆನ್ರಿ ಮತ್ತು ಕ್ಯಾಥೋಲಿಕ್ ಚರ್ಚಿನ ಥಾಮಸ್ ಬೆಕೆಟ್ ನಡುವೆ ಆದ ಸಮರ. (ಆನ್ವಿಯವರು ನಾಟಕ ಬರೆಯುವಾಗ ಮುಂದೆ ಸಂತರೆಂದು ಘೋಷಿತರಾದ ಬೆಕೆಟ್ ಅವರನ್ನು ಸಾಕ್ಸನ್ ಜನಾಂಗದವರೆಂದು ತಪ್ಪಾಗಿ ಗ್ರಹಿಸಿದ್ದರು)
ಈ ಕೃತಿಯನ್ನು ಟಿ.ಎಸ್. ಎಲಿಯಟ್ ರಚಿಸಿದ ಕಾವ್ಯ ನಾಟಕವಾದ 'M**der in the Cathedral'ಗೆ ವಿಮರ್ಶಕರು ಆಗಾಗ ಹೋಲಿಸುವುದು ಉಂಟು. ಅದೇ ಮೂಲ ಐತಿಹ್ಯ ಮತ್ತು ಮುಖ್ಯ ಪಾತ್ರಗಳು ಎರಡೂ ಕೃತಿಗಳಲ್ಲಿ ಕಾಣಿಸಿಕೊಂಡರೂ, ಅವು ಎತ್ತಿ ಹಿಡಿಯುವ ಪ್ರಶ್ನೆಗಳು ಬೇರೆ ಬೇರೆ ಎಂದು ನನ್ನ ಅನಿಸಿಕೆ. ಎಲಿಯಟ್ ನಾಟಕದಲ್ಲಿ ಕೇಂದ್ರ ಕಷ್ಟ ಅದರ ಬೆಕೆಟ್ ಪಾತ್ರದ ನೈತಿಕ ಸತ್ವ ಪರಿಕ್ಷೆಯಾದರೆ, ಆನ್ವಿಯ ಬೆಕೆಟ್ ಎದುರಿಸುವುದು ಧರ್ಮಸಂಕಟ.
ಆನ್ವಿಯ ಬೆಕೆಟ್ ನಾಟಕದಲ್ಲಿ ಕೇಂದ್ರ ಕದನ ಎಂದರೆ ರಾಜಕಾರಣ ಮತ್ತು 'ಧರ್ಮ'ದ ನಡುವೆ ಎನ್ನುವವರಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಇಲ್ಲಿಯ ಬೆಕೆಟ್ ಪರಿಹರಿಸಬೇಕಾದ ಸಮಸ್ಯೆ ನಿಷ್ಠೆಯದು - ಅದನ್ನು ತಾನು ರಾಜನಿಂದ ದೇವರಿಗೆ ವರ್ಗಾಯಿಸಬೇಕು. ಬಗೆಹರಿಸಲಾಗದ ಬಿಕ್ಕಟ್ಟು ಏನಂದರೆ ರಾಜನ ಸೇವೆ, ದೇವರ ಸೇವೆ ಎರಡೂ ಏಕಕಾಲಕ್ಕೆ ತನಗೆ - ರಾಜನ ಸ್ನೇಹಿತ ಮತ್ತು ಪ್ರೀತಿಪಾತ್ರನಾಗಿಯೂ - ಮಾಡಲು ಸಾಧ್ಯವಿಲ್ಲ ಅನ್ನಿಸುವುದು.
ಆನ್ವಿಯ ಬೆಕೆಟ್ ಪಿ. ಲಂಕೇಶರ 'ಸಂಕ್ರಾಂತಿ'ಯ ಸಾತ್ವಿಕ ಬಸವಣ್ಣನಲ್ಲ. ಗಿರೀಶ್ ಕಾರ್ನಾಡರ 'ತಲೆದಂಡ'ದ ಬಸವಣ್ಣನೂ ಅಲ್ಲ. ಈತ ಪ್ರಾರಂಭಕ್ಕೆ ಮೋಜುಗಾರ, ಸೊಗಸುಗಾರ, ವಿಷಯಲಂಪಟ. ಇಂಥವನು ದೇವರಗೆ ಮುಖಕೊಡಬೇಕು, ಕಣ್ಣಲ್ಲಿ ದೇವರನ್ನು ತುಂಬಿಕೊಂಡು ಎಲ್ಲ ಸಾಮ್ರಾಜ್ಯಗಳಂತೆ "ದೇವರ ಸಾಮ್ರಾಜ್ಯ"ವನ್ನೂ ಕಾಪಾಡಬೇಕು. ಸ್ವಲ್ಪ ಮಟ್ಟಿಗೆ ಈ ಬೆಕೆಟ್ ಪಡುವ ಧರ್ಮಸಂಕಟ, ಸಲಿಮ್-ಜಾವೆದ್ ರಚಿಸಿದ 'ನಮಕ್ ಹರಾಮ್' ಚಿತ್ರದಲ್ಲಿ ಕಾಣಬಹುದು.
ಇದಲ್ಲದೆ ವಸಾಹತುಶಾಯಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲಕ್ಕೂ ಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ.

ಕೃತಜ್ಞತೆಗಳು: 

ಎ.ಎನ್. ಪ್ರಸನ್ನ ಅವರ ಮೂಲ ಅನುವಾದ , ಅಲೆಯಾನ್ಸ್ ಫ್ರಾನ್ಸೈಸ್ ಬೆಂಗಳೂರು

Venue Map